ವಿಜಯಪುರ ಕೋರ್ಟ್ ಬಳಿ ನಡಿತು ಹೃದಯ ವಿದ್ರಾವಕ ಘಟನೆ

ವಿಜಯಪುರ ಕೋರ್ಟ್ ಬಳಿ ನಡಿತು ಹೃದಯ ವಿದ್ರಾವಕ ಘಟನೆ

ವಿಜಯಪುರ : ಕೋರ್ಟ್ ನ ಹೊರಗಡೆ ಆವರಣದಲ್ಲಿ ವಿದ್ಯುತ್ ತಗುಲಿ ಬಾಲಕ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

ಬಾಲಕನ ತಂದೆ ಕೌಟುಂಬಿಕ ವ್ಯಾಜ್ಯದ ಕಾರಣ ಕೋರ್ಟ್ ಗೆ ಹಾಜರಾಗಲು ಆಗಮಿಸಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮಾಸಿದ್ದ ಮಲಕಾರಿ ಒಡೆಯರ (4) ದುರ್ಮರಣಕ್ಕೀಡಾದ ಬಾಲಕ. ತಂದೆ ಕೋರ್ಟ್ ನ ಹೊರವಲಯದ ಆವರಣದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಪಡೆಯುತ್ತಿದ್ದ ಸಂದರ್ಭದಲ್ಲಿ, ಪಕ್ಕದಲ್ಲೇ ಕಂಬದ ಬಳಿಯಿದ್ದ ವೈಯರ್ ತಗುಲಿ ಬಾಲಕನಿಗೆ ವಿದ್ಯುತ್ ಪ್ರವಹಿಸಿದೆ. ನಂತರ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಸಾವಿಗೀಡಾಗಿದ್ದಾನೆ.

ಸ್ಥಳಕ್ಕೆ ವಿಜಯಪುರ ಜಲನಗರ ಪೊಲೀಸರು ಬೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.