ದೇವರೇ ಸರ್ಕಾರವನ್ನು ಉಳಿಸುತ್ತಾನೆ. ಸಚಿವ ಎಂಸಿ ಮನಗೂಳಿ ವಿಶ್ವಾಸ

ದೇವರೇ ಸರ್ಕಾರವನ್ನು ಉಳಿಸುತ್ತಾನೆ. ಸಚಿವ ಎಂಸಿ ಮನಗೂಳಿ ವಿಶ್ವಾಸ

ವಿಜಯಪುರ : ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯುತ್ತೋ ಬಿಡುತೋ ಎಲ್ಲ‌ ದೇವರ‌ ಮೇಲೆ ಬಾರ ಹಾಕಿದ್ದೇವೆ ಎಂದು ತೋಟಗಾರಿಕೆ ಸಚಿವ ಎಂಸಿ ಮನಗೂಳಿ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಮಾತನಾಡಿದ ಸಚಿವ ಎಂಸಿ ಮನಗೂಳಿ, ದೇವರೇ ಸರ್ಕಾರವನ್ನ ಉಳಿಸಲಿದ್ದಾನೆ ಎಂದರು. ನಾವು ದೇವರ ಮೇಲೆ ಅವಲಂಬಿತವಾಗಿದ್ದೇವೆ.ನಾವು ದೇವರನ್ನ ನಂಬುತ್ತೇವೆ, ದೇವರು ಏನು ಮಾಡ್ತಾನೆ ನೋಡೋಣ.
ದೇವರು ಸರ್ಕಾರ ಉಳಿಸುತ್ತಾನೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮುಂದಿನ ಬೆಳವಣಿಗೆ ಬಗ್ಗೆ ಮಾತನಾಡೊಲ್ಲ ಎಂದ ಮಾಧ್ಯಮಗಳಿಂದ ದೂರವೇ ಉಳಿದರು.