ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡೋದಿಲ್ಲ‌. ಆನಂದ ನ್ಯಾಮಗೌಡ ಸ್ಪಷ್ಟನೆ

ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡೋದಿಲ್ಲ‌. ಆನಂದ ನ್ಯಾಮಗೌಡ ಸ್ಪಷ್ಟನೆ

ಬಾಗಲಕೋಟೆ : ರಾಜೀನಾಮೆ ವದಂತಿಗೆ ಜಮಖಂಡಿ ಕೈ ಶಾಸಕ ಆನಂದ ನ್ಯಾಮಗೌಡ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಲ್ಲ.‌ ಬಿಜೆಪಿ ನಾಯಕರಿಂದ ನನಗೆ ಆಹ್ವಾನ ಬಂದಿದ್ದು ನಿಜ. ಮೂರು ದಿನಗಳಿಂದ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಅವರ ಹೆಸರು ಬಹಿರಂಗ ಪಡಿಸಲ್ಲ. ಜೊತೆಗೆ ನಾನು ಪಕ್ಷ ಬಿಟ್ಟು ಹೋಗಲ್ಲ ಅಂತ ಹೇಳಿಕೆ ನೀಡಿದ್ದಾರೆ.

ಜನರ ಆಶೀರ್ವಾದದಿಂದ ಮೊದಲ ಬಾರಿಯೇ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜನರ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಲ್ಲ. ನಮ್ಮ ತಂದೆಯೂ ಕಾಂಗ್ರೆಸ್ ನಲ್ಲಿಯೇ ಇದ್ದರು. ‌ನಾನು ಇಲ್ಲಿಯೇ ಇರುತ್ತೇನೆ. ನಮ್ಮ ತಂದೆಯ ಹೆಸರು ಉಳಿಸಲು ರಾಜಕೀಯಕ್ಕೆ ಬಂದಿದ್ದೇನೆ. ಅವರ ಹೆಸರಿಗೆ ಕಪ್ಪು ಚುಕ್ಕೆ‌ ತರಲು ಬಂದಿಲ್ಲ.‌ ಇದರಲ್ಲಿ ಯಾವುದೇ ಸಂಶಯವಿಲ್ಲ ಅಂತಾ ಹೇಳಿದ್ದಾರೆ.‌ ಕ್ಷೇತ್ರದ ಜನರೇ ನನಗೆ ದೇವರಿದ್ದಂತೆ ಎಂದಿದ್ದಾರೆ.