ಆದಷ್ಟು ಬೇಗ ಕಾಂಗ್ರೆಸ್ ಬಿಡುವಂತೆ ಕಾಂಗ್ರೆಸ್ ನಲ್ಲಿರುವ ಸ್ನೇಹಿತರಿಗೆ ಹೇಳಿದ್ದೇನೆ. ಶಾಸಕ ನಡಹಳ್ಳಿ

ಆದಷ್ಟು ಬೇಗ ಕಾಂಗ್ರೆಸ್ ಬಿಡುವಂತೆ ಕಾಂಗ್ರೆಸ್ ನಲ್ಲಿರುವ ಸ್ನೇಹಿತರಿಗೆ ಹೇಳಿದ್ದೇನೆ. ಶಾಸಕ ನಡಹಳ್ಳಿ

ವಿಜಯಪುರ : ಕಾಂಗ್ರೆಸ್ ಪಕ್ಷದಲ್ಲಿ ಜಾತಿ ಹಾಗೂ ಹಣ ಮುಖ್ಯವಾಗಿದೆ. ಈ ಹಿಂದೆ ನಾನೂ ಕಾಂಗ್ರೆಸ್ ನಲ್ಲಿದ್ದೆ, ಎರಡು ಬಾರಿ ಕೈ ಶಾಸಕನಾಗಿದ್ದೆ. ಅಲ್ಲಿ ವಾತಾವರಣ ನೋಡಿ ಹೊರ ಬಂದೆ ಎಂದು ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಜಾತಿ, ಹಣ ಬಿಟ್ಟು ಬೇರೆನೂ ಇಲ್ಲ. ಬಡವರ, ಸಾಮಾನ್ಯರ ಬಗ್ಗೆ ಚಿಂತನೆ ಮಾಡುವ ವಿಚಾರ ಅಲ್ಲಿಲ್ಲ. ಕಾಂಗ್ರೆಸ್ ಇಡೀ ದೇಶದ ತುಂಬ ನಾಶವಾಯ್ತು ಎಂದಿದ್ದಾರೆ.

ನಾಳೆ ಬೀಳತ್ತೆ, ಇಂದು ಬೀಳತ್ತೆ ಎಂದು ಇವತ್ತು 12 ಶಾಕರು ಒಟ್ಟಾಗಿ ರಾಜೀನಾಮೆ ನೀಡಿದ್ದಾರೆ. ನನಗೆ ತಿಳಿದ ಪ್ರಕಾರ 20 ರಿಂದ 25 ಜನ ಕೈ ಶಾಸಕರು ರಾಜೀನಾಮೆ ನೀಡುತ್ತಾರೆ. ಇನ್ನೂ ಐದಾರು ಜನರ ರಾಜೀನಾಮೆ ನೀಡಲಿದ್ದಾರೆ. ಆದಷ್ಟು ಬೇಗಾ ಕಾಂಗ್ರೆಸ್ ಬಿಟ್ಟು ಬನ್ನಿ ಎಂದು ಕಾಂಗ್ರೆಸ್ ನಲ್ಲಿರುವ ಸ್ನೇಹಿತರಿಗೆ ಹೇಳಿದ್ದೇನೆ ಎಂದರು.‌ ಇದೇ ವೇಳೆ ನೀರಾವರಿಯಲ್ಲಿ ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ನಡಹಳ್ಳಿ ಆರೋಪಿಸಿದರು.