ನಿರುದ್ಯೋಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತ

ನಿರುದ್ಯೋಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತ

ಭಾರತ ಇಂದು ಜಗತ್ತಿಗೆ ವಿಶ್ವಗುರು ಆಗಲು ಹೊರಟಿದೆ. ತಪ್ಪೇನಿಲ್ಲಪಾಶ್ಚಾತ್ಯ ರಾಷ್ಟ್ರಗಳು ಕೂಡ ಭಾರತದತ್ತ ಮುಖಮಾಡುತ್ತಿವೆ. ಇದು ಭಾರತ ಪ್ರಜೆಗಳಿಗೆ ಹೆಮ್ಮೆಯ ವಿಷಯ. ಬಾಹ್ಯವಾಗಿ ನಮ್ಮ ದೇಶ ಬಲಿಷ್ಠವಾಗಿ ಕಂಡರೂ ಕೂಡ ಆಂತರಿಕವಾಗಿ ನಾವು ದುರ್ಬಲರಾಗುತ್ತ ಹೊರಟ್ಟಿದ್ದೇವೆ. ಇದು ದೇಶದ ಚುಕ್ಕಾಣಿ ಹಿಡಿದ ನಾಯಕರುಗಳಿಗೆ ಕಾಣಿಸುತ್ತಿಲ್ಲ. ಕಂಡರು ಪರಿಹಾರ ಹುಡುಕುವ ಸಮಯ ಅವರಿಗಿಲ್ಲ.

ಯಾಕೆಂದರೆ ಜನಪ್ರತಿನಿಧಿಗಳಿಗೆ ಬೇಕಾಗಿರುವುದು ಪಕ್ಷಅಧಿಕಾರಕೆಳಮಟ್ಟದ ರಾಜಕಾರಣ ಅವರು ತಮ್ಮ ಸ್ವಾರ್ಥಕ್ಕಾಗಿ ಬಾಹ್ಯವಾಗಿ ಭಾರತದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ವಾಸ್ತವವಾಗಿ ನೋಡಿದರೆ ಭಾರತ ದೇಶ ಯಾವ ದಿಕ್ಕಿನತ್ತ ಹೊರಟಿದೆ ಅಂತ ತಿಳಿಯುತ್ತದೆ.

 

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಕೇಂದ್ರ ಸರಕಾರವಾಗಲಿರಾಜ್ಯ ಸರಕಾರವಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಆಡಳಿತ ಪಕ್ಷ ವಿರೋದ ಪಕ್ಷ ತಮ್ಮ ತಮ್ಮ ಸಿದ್ಧಾಂತ ಹೇಳಿಕೊಳ್ಳುವದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇವರಿಗೆ ಹೇಳುವವರು ಯಾರು ಇಲ್ಲದಂತಾಗಿದೆ. ಯುವ ಶಕ್ತಿಯ ಬಗ್ಗೆ ಮಾತನಾಡುವ ನಾಯಕರುಗಳೆ ಸ್ವಲ್ಪ ಯುವ ಶಕ್ತಿಯ ಕಡೆ ಗಮನ ಹರಿಸಿ ನಿರುದ್ಯೋಗ ಸಮಸ್ಯ ಪರಿಹರಿಸಿ.

1979 ರಲ್ಲಿ ಡಾ|| ಎಂ. ಬ್ರೇನ್ನರ್ರವರು ಮನಸ್ಸಿನ ಮೇಲೆ ಸಾಮಾಜಿಕ ಪರಿಸರದ ಪ್ರಭಾವ ಎಂಬ ವಿಷಯದ ಬಗ್ಗೆ ಅಧ್ಯಯನ ನಡೆಸಿದರು. ಇದರಿಂದ ಬ್ರೇನ್ನರ್ ಕಂಡುಕೊಂಡದೆನೆಂದರೆ ಪ್ರತಿ ಶೇಕಡಾ 10 ರಷ್ಟು ನಿರುದ್ಯೋಗ ಹೆಚ್ಚಾದಂತೆ ಒಟ್ಟು ಸಾವಿನ ಸಂಖ್ಯೆಯಲ್ಲಿ 1.2%ಹೆಚ್ಚಾಗುವುದು. 1.7% ಹೃದಯ ರೋಗಕ್ಕೆ ತುತ್ತಾಗುವರು, 1.3% ಕುಡಿತದಿಂದಾಗಿ ಯಕೃತಿನ ತೊಂದರೆಗೆ ಒಳಪಡುವರು. 1.7%ಆತ್ಮಹತ್ಯೆ ಮಾಡಿಕೊಳ್ಳುವು, 4.0% ಬಂಧನಕೊಳ್ಳಗಾಗುವರು, 0.8% ಆಕ್ರಮಣ ಮಾಡಿ ಪೋಲೀಸರ ಅತಿಥಿ ಆಗುವರುನಿರುದ್ಯೋಗದಿಂದ ಇಷ್ಟೇಲ್ಲ ಸಮಸ್ಯೆಯಾಗುತ್ತದೆ ಅಂದರೆ ದೇಶ ಹೇಗೆ ಅಭಿವೃದ್ಧಿ ಹೊಂದುತ್ತದೆಯುವ ಶಕ್ತಿ ಇಷ್ಟೇಲ್ಲ ತೊಂದರೆಗೆ ಒಳಗಾದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವೇ ಬುದ್ದಿಜೀವಿಗಳೆ ವಿಚಾರ ಮಾಡಬೇಕು.

ಸಮಾಜದಲ್ಲಿ ನಿರುದ್ಯೋಗಿಯಾದ ಒಬ್ಬ ವ್ಯಕ್ತಿ ತನ್ನ ಉಳಿವಿಗಾಗಿ ಯಾವುದೇ ಬೆಲೆಯ ಸಂಬಳ ಸಿಗುವ ಒಂದು ಹೊಸ ಕೆಲಸವನ್ನು ಪಡೆಯುವುದರ ಮೂಲಕ ಒಬ್ಬ ಉದ್ದಿಮೆದಾರನಾಗುವ ಮೂಲಕ ಅಥವಾ ಮೋಸದ ಅತೀ ಕಿಳುಮಟ್ಟದ ಆರ್ಥಿಕತೆಯನ್ನು ಸೇರಿಕೊಳ್ಳುವುದರ ಮೂಲಕ ತನ್ನ ನಿತ್ಯದ ಬದುಕಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲೇಬೇಕು. ಉತ್ತಮ ಮಾರ್ಗವಾಗಿ ಉದ್ಯೋಗ ಪಡೆದರೆ ತೊಂದರೆಯಿಲ್ಲ. ಕೀಳುಮಟ್ಟದ ಕೆಲಸ ಕಾರ್ಯಗಳಿಗೆ ತೊಡಗಿದರೆ ಆರೋಗ್ಯಕರ ಸಮಾಜ ನಿರ್ಮಾಣವಾಗುವುದು ಕಷ್ಟ.

ಯುವ ಶಕ್ತಿಯ ತೊಂದರೆ ಏನು ಅಂತಾ ದೇಶದ 150 ಕೋಟಿ ಜನತೆಗೆ ತಿಳಿದೆ ಇದೆ. ಆದರೂ ಯಾರು ಇದರ ಕಡೆ ಗಮನ ನೀಡುತ್ತಿಲ್ಲ. ಸರಕಾರಿ ಇಲಾಖೆಗಳಲ್ಲಿ  ಖಾಲಿ ಹುದ್ದೆಗಳು ಇದ್ದರೂ ಬೆರಳೆಣಿಕೆಯಷ್ಟು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವುದು ಸರಕಾರದ ದೌರ್ಬಲ್ಯವೆಂದು ಹೇಳಬೇಕು. ಸರಕಾರಿ ಉದ್ಯೋಗ ಪಡೆಯಲು ಲಂಚ ನೀಡಬೇಕು. ಖಾಸಗಿ ವಲಯದಲ್ಲಿ ಉದ್ಯೋಗ ಸಿಕ್ಕರು ಸರಿಯಾದ ವೇತನ ಸಿಗುವುದಿಲ್ಲ. ವೇತನ ಸಿಕ್ಕರೂ ಸಂಸಾರ ನಡೆಸುವಷ್ಟು ವೇತನ ನೀಡುವುದಿಲ್ಲ.

2015-16ನೇ ಸಾಲಿನಲ್ಲಿ ದೇಶದಲ್ಲಿಯ ನಿರುದ್ಯೋಗ ಪ್ರಮಾಣ ಶೇ. 5ರಷ್ಟು ಹೆಚ್ಚಿರುವ ಆಘಾತಕಾರಿ ವಿಷಯವನ್ನು ಕಾರ್ಮಿಕ ಮಂಡಳಿ ವರದಿ ಮಾಡಿದೆ. ಇದು ಕೇಂದ್ರದಲ್ಲಿರುವ ಬಿ.ಜೆ.ಪಿ.ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು ಕಳೆದ ಐದು ವರ್ಷಗಳಲ್ಲಿನ ಗರಿಷ್ಠ ಮಟ್ಟ ಇದಾಗಿದೆ. ವರದಿಯಲ್ಲಿನ ಪ್ರಮುಖ ಅಂಶಗಳು 2015-16 ರಲ್ಲಿ ನಗರ ಪ್ರದೇಶದಲ್ಲಿ ಶೇ 4.9% ರಷ್ಠಿದುಗ್ರಾಮೀಣ ಭಾಗದ ನಿರುದ್ಯೋಗ ಪ್ರಮಾಣ ಶೇ 5.1 ರಷ್ಠಿದೆಮಹಿಳೆಯಲ್ಲಿ ನಿರುದ್ಯೋಗ ಪ್ರಮಾಣ ಶೇ 9.7%, ಪುರುಷರಲ್ಲಿ ನಿರುದ್ಯೋಗ ಪ್ರಮಾಣ ಶೇ 4.3, ಶೇ 77 ರಷ್ಟು ಕುಟುಂಬಗಳಿಗೆ ನಿಶ್ಚಿತ ವೇತನ ಇಲ್ಲ. ತ್ರಿಪುರಾ ರಾಜ್ಯ ಅತ್ಯಂತ ಹೆಚ್ಚು ನಿರುದ್ಯೋಗ ಪ್ರಮಾಣ ಶೇ 19.7 ರಷ್ಠುಹೊಂದಿದೆ.

ಭಾರತ ಹೆಚ್ಚು ಯುವ ಶಕ್ತಿಯನ್ನು ಹೊಂದಿದ್ದರು ಅದು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ನಿರುದ್ಯೋಗಕೆಳಮಟ್ಟದ ಜೀವನಕ್ಕೆ ಆಹ್ವಾನ ನೀಡುತ್ತಿದೆ. ಇದು ಅಭಿವೃದ್ಧಿಯ ಲಕ್ಷಣವಲ್ಲ. ಅಧೋಗತಿಯ ಲಕ್ಷಣ. ಭಾರತದ ಮಾನವ ಸಂಪನ್ಮೂಲ ಸರಿಯಾಗಿ ಬಳಕೆಯಾದರೆ ವಿಶ್ವಗುರು ಸ್ಥಾನವನ್ನು ನಾವು ಪಡೆದುಕೊಳ್ಳುತ್ತೇವೆ. ಇಲ್ಲವಾದರೆ ಬಡತನದ  ಭಾರತ ಹಣೆಪಟ್ಟಿ ತಪ್ಪಿದಲ್ಲ.

ವಾಯ್.ಪಿ.ವಿರುಪಾಕ್ಷ