ಕುಮಾರಸ್ವಾಮಿ ನನಗೆ ಹಣ ಕೇಳಿದನ್ನ ಕಾಂಗ್ರೆಸ್ ನಾಯಕರೇ ಸಿಡಿ ಮಾಡಿದ್ದರು. ವಿಜುಗೌಡ ಪಾಟೀಲ್ ಆರೋಪ

ಕುಮಾರಸ್ವಾಮಿ ನನಗೆ ಹಣ ಕೇಳಿದನ್ನ ಕಾಂಗ್ರೆಸ್ ನಾಯಕರೇ ಸಿಡಿ ಮಾಡಿದ್ದರು. ವಿಜುಗೌಡ ಪಾಟೀಲ್ ಆರೋಪ

ವಿಜಯಪುರ : ಸಿಎಂ ಕುಮಾರಸ್ವಾಮಿ ನನ್ನನ್ನ ಎಂಎಲ್ಸಿ ಮಾಡಲು ನನ್ನ‌‌ ಬೆಂಬಲಿಗರ ಬಳಿ‌‌ ಹಣ ಕೇಳಿದ್ದ ವಿಚಾರವನ್ನ ಕಾಂಗ್ರೆಸ್ ನಾಯಕರೇ ರೆಕಾರ್ಡ್ ‌ಮಾಡಿ‌ ಸಿಡಿ‌ ಮಾಡಿದ್ದರು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಏನು ಸತ್ಯಹರಿಚಂದ್ರ ಅಲ್ಲ ಬಿಜೆಪಿಯವರು ಹಣದ ಆಮಿಷ ಒಡ್ಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು‌ ನೀಡಿದರು.

ನಾನು‌ ಜೆಡಿಎಸ್ ನಲ್ಲಿದ್ದಾಗ‌ ಕುಮಾರಸ್ವಾಮಿ ನನಗೆ 30ಕೋಟಿ ಬೇಡಿಕೆ ಇಟ್ಟಿದ್ದರು. ಎಂಎಲ್ ಸಿ ಮಾಡಲು ನನ್ನ ಕಾರ್ಯಕರ್ತರ ಬಳಿ ಹಣ ನೀಡಬೇಕಾಗುತ್ತೆ ಎಂದು ಕೇಳಿದ್ದರು‌ ಎಂದು ಆರೋಪಿಸಿದರು.

ಬಿಜೆಪಿ ನಾಯಕರ‌ ಹೆಸರು ಕೆಡಿಸಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ನಮ್ಮ ಕಾರ್ಯಕರ್ತರ ಬಳಿ ಹಣ ಕೇಳಿದನ್ನ‌ ಕಾಂಗ್ರೆಸ್ ನಾಯಕರೇ ಆಡಿಯೋ‌ ಮಾಡಿದ್ದರು. ಅದನ್ನ ಕಾಂಗ್ರೆಸ್ ನಾಯಕರೇ ಸಿಡಿ ಮಾಡಿದ್ದರು. ಕುಮಾರಸ್ವಾಮಿ ಅವರಿಗೆ‌ ಮಾನ ಮರ್ಯಾದೆ ‌ಇಲ್ಲ ಎಂದು ವಿಜುಗೌಡ ಪಾಟೀಲ್ ಆರೋಪಿಸಿದರು.