ಶಾಸಕ ದೇವಾನಂದ ರೇಟ್ ಜಾಸ್ತಿ ಮಾಡಿಕೊಳ್ತಿದ್ದಾರೆ‌. ವಿಜುಗೌಡ ಪಾಟೀಲ್ ವಾಗ್ದಾಳಿ

ಶಾಸಕ ದೇವಾನಂದ ರೇಟ್ ಜಾಸ್ತಿ ಮಾಡಿಕೊಳ್ತಿದ್ದಾರೆ‌. ವಿಜುಗೌಡ ಪಾಟೀಲ್ ವಾಗ್ದಾಳಿ

ವಿಜಯಪುರ : ಬಿಜೆಪಿ ಹೆಸರು ಹೇಳಿಕೊಂಡು ಶಾಸಕ ದೇವಾನಂದ ಚೌವ್ಹಾಣ ತನ್ನ ರೇಟ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾನೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿಜುಗೌಡ ಪಾಟೀಲ್, ಬಿಜೆಪಿ ಪಕ್ಷದಿಂದ ದೇವಾನಂದ ಚೌವ್ಹಾಣ್ ಅವರಿಗೆ ಯಾವುದೇ ರೇಟ್ ನೀಡಲ್ಲ. ಶಾಸಕ ಚವ್ಹಾಣ ಬಹಳ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳಿ ತಮ್ಮ ರೇಟ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಜುಗೌಡ ಪಾಟೀಲ್ ಆರೋಪಿಸಿದ್ದಾರೆ‌.

ದೇವಾನಂದ ಅವರನ್ನು ಯಾವೊಬ್ಬ ಬಿಜೆಪಿ ಕಾರ್ಯಕರ್ತರು ಸಂಪರ್ಕ ಮಾಡಿಲ್ಲ. ದೇವಾನಂದ ಚೌವ್ಹಾಣ್ ನನ್ನ ಜೊತೆ ಜೆಡಿಎಸ್ ಪಕ್ಷದಲ್ಲಿದ್ದವರು, ಅವರ ಬಗ್ಗೆ ನನಗೆ ಗೊತ್ತಿದೆ ಟಾಂಗ್ ನೀಡಿದರು.