“ನಾರಿ” ಶಕ್ತಿಯ ಸಾಧನೆ. ನಮ್ಮ ಸಮಾಜದ ಹೆಮ್ಮೆ…

“ನಾರಿ” ಶಕ್ತಿಯ ಸಾಧನೆ. ನಮ್ಮ ಸಮಾಜದ ಹೆಮ್ಮೆ…

ಇಂದು ವಿಶ್ವ ಮಹಿಳಾ ದಿನ. ಮಹಿಳೆ ಅನಾದಿ ಕಾಲದಿಂದಲೂ ಶೋಷಣೆಯಲ್ಲಿ ಬೆಂದು ಬಂದಿದ್ದಾಳೆ. ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅವಳನ್ನು ಕಡೆಗಣಿಸುತ್ತಾ ಬಂದಿದ್ದೇವೆ. ನಮ್ಮ ಪೂರ್ವಿಕರು ಹೆಣ್ಣು ಮಕ್ಕಳಿಗೆ ಅಷ್ಟು ಸ್ವಾತಂತ್ರ್ಯ ನೀಡಿರಲಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಯಂತ್ರದ ರೂಪದಲ್ಲಿ ನೋಡಲಾಗುತ್ತಿತ್ತು. ಆಗಿನ ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದಳು. ಸ್ವಂತ ನಿರ್ಧಾರ ತೆಗೆದು ಕೊಳ್ಳುವಂತಿಲ್ಲ, ಸ್ವತಂತ್ರವಾಗಿ ತಿರುಗಾಡುವಂತಿಲ್ಲ, ಹೆಣ್ಣು ಭೋಗದ ವಸ್ತುವಿನಂತೆ ಕಂಡ ಹಳೆ ಸಮಾಜಕ್ಕೆ ಧಿಕ್ಕಾರ ಹಾಕಿ ತನ್ನ ಶಕ್ತಿ ಏನು ಅಂತಾ ತೋರಿಸಿ ಕೊಟ್ಟವಳು ನಮ್ಮ ಭಾರತೀಯ ಹೆಣ್ಣು ಮಕ್ಕಳು.

ಭಾರತೀಯರು ಹೆಣ್ಣನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತೇವೆ. ಎಲ್ಲಿ ಹೆಣ್ಣನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ಇರುವರು ಅಂತಾ ಪುರುಷ ಪ್ರಧಾನ ಸಮಾಜ ಹೇಳುತ್ತಾ ಬಂದಿದೆ. ಈಗಲೂ ಹೇಳತ್ತಾ ಹೊರಟಿದೆ. ಆದರೆ ಅವಳನ್ನು ನಾವು ಈಗಲೂ ತಾರತಮ್ಯದಿಂದಲೇ ನೋಡುತ್ತಿವೆ. ಒಂದು ಕುಟುಂಬದಲ್ಲಿ ಹೆಣ್ಣು ಮಗು ಜನಿಸಿತ್ತೇಂದರೆ ಅವಳಿಗೆ ಬಂಧನಗಳು ಪ್ರಾರಂಭವಾಗುತ್ತವೆ. ಈಗಲೂ ಕೆಲವು ಕಡೆ ಅನಾಗರಿಕ ಸಂಪ್ರದಾಯಗಳು ನಡೆಯುತ್ತವೆ.

 

ಇತಿಚೆಗಷ್ಟೆ ಕೇಳಿದ ಒಂದು ಸುದ್ಧಿ ಏನೆಂದರೆ ಗರ್ಭವತಿಯಾದ ಹೆಣ್ಣು ತನ್ನ ಪ್ರಸೂತಿಯನ್ನು ತಾನೇ ಮಾಡಿಕೊಳ್ಳಬೇಕು. ಮೂರು ದಿನಗಳ ಕಾಲ ಹಸು ಕಂದಮ್ಮನ ಜೊತೆ ತಾಯಿಯೊಬ್ಬಳೆ ಹೊರಗೆ ಇರಬೇಕು. ಇದಾವ ಸಂಪ್ರದಾಯ ಸ್ವಾಮಿ? ಯಾವ ದೇವರನ್ನು ಮೆಚ್ಚಿಸಲಿಕ್ಕೆ ಈ ಸಂಪ್ರದಾಯ? ಹೆಣ್ಣಿನ ಯಾತನೆ ಸ್ವಲ್ಪ ಗಂಡಸಿಗೂ ದೇವರು ಕೊಟ್ಟಿದ್ದರೆ ತಿಳಿಯುತಿತ್ತು. ಯಾರು ಶ್ರೇಷ್ಟರು ಅಂತ ಆದರೇ ಹಾಗೆ ಆಗಿಲ್ಲ. ಅದೇನೆ ಇರಲಿ ಅನಾಗರಿಕ ಸಂಪ್ರದಾಯದಿಂದ ಹೊರಗೆ ಬಂದು ನಾವು ಸ್ವತಂತ್ರವಾಗಿ ಬದುಕುತ್ತೇವೆ ಅಂತ ತೋರಿಸಿಕೊಟ್ಟ ನಮ್ಮ ಭಾರತೀಯ ಹೆಣ್ಣು ಮಕ್ಕಳಿಗೆ ಒಂದು ಸಲಾಮ್.

ಗೋಡ್ಡು ಸಂಪ್ರದಾಯವನ್ನು ಧಿಕ್ಕರಿಸಿ ತಮ್ಮ ಹೊಸ ಆಲೋಚನೆ ಯೊಂದಿಗೆ ಮುಂದುವರಿಯುತ್ತಿರುವ ನಮ್ಮ ಹೆಣ್ಣು ಮಕ್ಕಳಿಗೆ ಯಶಸ್ಸು ಹೀಗೆ ಸಿಗುತಿರಲಿ. ಪ್ರಾಚೀನ ಕಾಲದಿಂದಲೂ ತಮ್ಮ ಸ್ಥಾನಮಾನ ಕುಸಿತದಿಂದ ಹೋರಾಟ ಮಾಡುತ್ತಾ ಸಮಾನತೆಯ ಹಕ್ಕು ಉತ್ತೇಜಿಸುವ ಮೂಲಕ ಸಮಾಜದಲ್ಲಿ ಗುರುತಿಸು ವಂತಾಯಿತು. ಆಧುನಿಕ ಭಾರತದಲ್ಲಿ ಮಹಿಳೆಯರು ಯಾವ ಕ್ಷೇತ್ರವನ್ನು ಬಿಟ್ಟುಕೊಟ್ಟಿಲ್ಲ.ಎಲ್ಲ ರಂಗದಲ್ಲೂ ಅವರು ಸಾಧನೆ ಮಾಡಿದ್ದಾರೆ.

 

ಮಹಿಳಾ ಅಧ್ಯಕ್ಷರು, ಪ್ರಧಾನಿ, ಲೋಕಸಭೆಯ ಸ್ಪೀಕರ್, ಪ್ರತಿಪಕ್ಷ ನಾಯಕಿ, ಕೇಂದ್ರ ಸಚಿವರು, ರಾಜ್ಯ ಸಚಿವರು, ಮುಖ್ಯಮಂತ್ರಿ ಗಳು, ಗವರ್ನರ ಸೇರಿದಂತೆ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ. ಇಷ್ಟೇಲ್ಲದರ ಮಧ್ಯೆಯು ಭಾರತೀಯ ಹಣ್ಞು ಮಕ್ಕಳು ಶೋಷಣೆಗೆ ಒಳಗಾಗುತ್ತಾರೆ. ಇದು ಪುರುಷ ಪ್ರಧಾನ ಸಮಾಜದ ದೌರ್ಬಲ್ಯವೆಂದೆ ಹೇಳಬಹುದು. ಈಗಲೂ ಅತ್ಯಾಚಾರ, ಕೊಲೆ ನಡೆಯುತ್ತವೆ. ಮಹಿಳೆಯ ಪರ ಕಾಯ್ದೆ ಕಾನೂನುಗಳಿದ್ದರೂ ದುಷ್ಯ ಕೃತ್ಯಗಳು ನಡೆಯುತಲೇ ಇದೆ. ಇದು ಪುರುಷ ಸಮಾಜ ವಿಚಾರ ಮಾಡಬೇಕು. ಹೇಯ ಕೃತ್ಯಗಳು ನಿಲ್ಲಬೇಕು. ಅಂದಾಗ ಉತ್ತಮ ಸಮಾಜ ನಿರ್ಮಾಣ ಹೊಂದುವುದು.

ನವ ಭಾರತದ ಮಹಿಳೆಯರು ಅನೇಕ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದಾರೆ. ಭಾರತೀಯ ಮಹಿಳೆ ನಾವು ಯಾವುದರಲ್ಲೂ ಕಮ್ಮಿ ಇಲ್ಲ ಅಂತಾ ತೋರಿಸಿ ಕೊಟ್ಟಿದ್ದಾರೆ. ನಮ್ಮಿಂದ ಉತ್ತಮ ಸಮಾಜ ನಿರ್ಮಾಣವಾಗುವುದು ಅಂತಾ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ಅಂತ ಮಹಿಳೆಯರನ್ನು ನೆನೆಯುವುದು ಅವಶ್ಯಕವಾಗಿದೆ ಮತ್ತು ಅವರ ಬಗ್ಗೆ ಹೇಳದೆ ಹೋದರೆ ತಪ್ಪಾಗುತ್ತದೆ.

 

ಮದರ ತೆರೆಸಾ ನೊಬೆಲ್ ಶಾಂತಿ ಪ್ರಶಸ್ತಿಯನ್ನ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಇಂದಿರಾ ಗಾಂಧೀ ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿದ್ದರು. ದೇಶದ ಮೊದಲ ರಾಷ್ಟ್ರಪತಿ ಪ್ರತಿಭಾ ಪಾಟೀಲರವರು, ಕಿರಣ ಬೇಡಿ ಇಂಡಿಯನ್ ಪೋಲಿಸ್ ಸರ್ವಿಸ್ ಗೆ ಸೇರ್ಪಡೆಯಾಗಿ ಭಾರತದ ಮೊದಲ ಮಹಿಳಾ ಅಧಿಕಾರಿಯಾದರು. ಅಂಜಲಿ ಗುಪ್ತಾ ಭಾರತೀಯ ವಾಯುಪಡೆಯಲ್ಲಿ ಮೊದಲ ಮಹಿಳಾ ಅಧಿಕಾರಿಯಾದಳು. ಹೀಗೆ ಇನ್ನೂ ಅನೇಕ ಮಹಿಳೆಯರು ಸಾಧನೆಗೈದಿದ್ದಾರೇ.

ಮೊನ್ನೆ ಭಾರತೀಯ ಸೈನಿಕರ ಮೇಲೆ ಉಗ್ರರು ದಾಳಿಮಾಡಿ 44 ಕ್ಕೂ ಹೆಚ್ಚೂ ಯೋಧರನ್ನು ಬಲಿತೆಗೆದುಕೊಂಡ ಪಾಕಿಸ್ತಾನಿ ಉಗ್ರರಿಗೆ ಅವರ ನೆಲದಲ್ಲೇ ಗುಂಡಿ ತೊಡಿ ಬರುವಂತೆ ಮಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜತಾಂತ್ರಿಕತೆಯಲ್ಲಿ ಯಶಸ್ಸು ಸಾಧಿಸಿದ ಸುಷ್ಮಾ ಸ್ವರಾಜ್ ಇವರುಗಳು ಯುವ ಜನತೆಯ ಆಶೋತ್ತರಗಳಿಗೆ ಸ್ಪೂರ್ತಿಯಾಗಿದ್ದಾರೆ.

ಅದೇನೆ ಇರಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಗಂಡಿಗಿಂತ ಹೆಣ್ಣಿನ ಪಾತ್ರ ಮುಖ್ಯ . ಅಂತ ಹೆಣ್ಣಿಗೆ ಅಗೌರವ, ಅನಾಚಾರ, ಅತ್ಯಾಚಾರ ಮಾಡುವುದು ಎಷ್ಟು ಸರಿ ಅಂತಾ ಪುರುಷ ಪ್ರಧಾನ ಸಮಾಜ ಒಮ್ಮೆ ವಿಚಾರ ಮಾಡಿ ನೋಡಿ. ಅಂತಾ ಹೇಳುತ್ತಾ “ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು”.

ವಾಯ್.ಪಿ.ವಿರುಪಾಕ್ಷ