ಸಿದ್ದಲಿಂಗ ಮಹಾರಾಜ ಜೀವನಾಧಾರಿತ ಚಲನಚಿತ್ರದ ಚಿತ್ರಿಕರಣ ಆರಂಭ

ಸಿದ್ದಲಿಂಗ ಮಹಾರಾಜ ಜೀವನಾಧಾರಿತ ಚಲನಚಿತ್ರದ ಚಿತ್ರಿಕರಣ ಆರಂಭ

ವಿಜಯಪುರ : ಲಚ್ಯಾಣದ ಶ್ರೀ ಪವಾಡ ಪುರುಷ ಸಿದ್ದಲಿಂಗ ಮಹಾರಾಜ ಜೀವನ ಚರಿತ್ರೆಯ ಆಧಾರಿತ ಚಲನಚಿತ್ರದ ಚಿತ್ರೀಕರಣ ಇಂಡಿ ನಗರದ ದಾದಾಗೌಡ ಪಾಟೀಲರ ಐತಿಹಾಸಿಕ ಮನೆಯಲ್ಲಿ ಹಾಗೂ ತಾಲೂಕಿನ ಸುಕ್ಷೆತ್ರ ಲಚ್ಯಾಣ ಗ್ರಾಮದಲ್ಲಿ ನಡೆಯುತ್ತಿದೆ.

ಬಂಥನಾಳ ವೃಷಭಲಿಂಗೆಶ್ವರ ಪಿಲಂಸ್ ಲಚ್ಯಾಣರವರ ಶ್ರಿ.ಮ.ನ.ಪ್ರ. ವೃಷಭಲಿಂಗೆಶ್ವರ ಮಹಾಸ್ವಾಮಿಗಳು ಬಂಥನಾಳ ಇವರ ಕೃಪಾ ಆರ್ಶಿವಾದದೊಂದಿಗೆ ಚಿತ್ರ ಮೂಡಿಬರಲಿದೆ. ಶ್ರೀ ಸಿದ್ದಲಿಂಗ ಮಹಾರಾಜರ ಪಾತ್ರದಲ್ಲಿ ಡಾ,ಶ್ರೀಧರ ಕಾಣಿಸಿ ಕೊಂಡಿದ್ದಾರೆ ಸಹಕಲಾವಿದರಾಗಿ ಗಣೇಶರಾವ. ಸುನಂದಾ. ಉಮಾಶಂಕರ. ಆಶಾ ಮೆೃತ್ರಿ. ರಾಮಚಂದ್ರ ಹಂಜಗಿ. ಬಾಲಕೃಷ್ಣ. ಬಾಲಕ ಸಿದ್ದಲಿಂಗ ಪಾತ್ರದಲ್ಲಿ ಚಿನ್ಮಯ ಸೇರಿದಂತೆ ಅನೇಕ ಹಿರಿಯ ಕಿರಿಯ ಕಲಾವಿದರು ಈ ಚತ್ರದಲ್ಲಿ ನಟಿಸುತ್ತಿದ್ದಾರೆ.

ಹಳಿಂಗಳಿಯ ಕಮರಿಮಠ ಸದ್ಗುರು ಶಿವಾನಂದ ಮಹಾ ಸ್ವಾಮಿಗಳು ಚಿತ್ರಕಥೆಯನ್ನು ಕಾರ್ಯಕಾರಿ ನಿರ್ಮಾಪಕ ರಾಗಿದ್ದಾರೆ. ಸಂಭಾಷಣೆ ಪದ್ಮಣ್ಣ ನರಸಣ್ನವರ, ಸಾಹಿತ್ಯ ಮತ್ತು ನಿರ್ದೇಶನ ಸಿ.ಜಿ. ವೆಂಕಟೇಶರಾವ. ಛಾಯಾಗ್ರಹಣ ಜಗನಬಾಬು. ಸಹ ನಿರ್ದೇಶನ ಶ್ರಿನಿವಾಸ ಪ್ರಸಾದ ಶಂಕರ ಪಾಟಿಲ. ಕಲಾ ನಿರ್ದೆಶನ ಸಚಿನ್ ಬಂಡಿವಡ್ಡರ ವರ್ಣಲಂಕಾರ ಮಹೇಶಬಾಬು ಸೇರಿದಂತೆ ಅನೆಕ ತಂತ್ರಜ್ಞರು ಭಾಗವಹಿಸಿದ್ದು, ಮುಂದಿನ ಕೆಲವು ತಿಂಗಳಗಳಲ್ಲಿ ಚಿತ್ರ ತೆರೆ ಮೇಲೆ ಬರಲಿದೆ.