ಶಿವಾನಂದ ಪಾಟೀಲ್ ಗನ್ ಮ್ಯಾನ್ ಹಾಗೂ ಎಸ್.ಕೆ ಬೆಳ್ಳುಬ್ಬಿ ಪುತ್ರನ ಮಾರಾಮಾರಿ

ಶಿವಾನಂದ ಪಾಟೀಲ್ ಗನ್ ಮ್ಯಾನ್ ಹಾಗೂ ಎಸ್.ಕೆ ಬೆಳ್ಳುಬ್ಬಿ ಪುತ್ರನ ಮಾರಾಮಾರಿ
ಶಿವಾನಂದ ಪಾಟೀಲ್ ಗನ್ ಮ್ಯಾನ್ ಹಾಗೂ ಎಸ್.ಕೆ ಬೆಳ್ಳುಬ್ಬಿ ಪುತ್ರನ ಮಾರಾಮಾರಿ

ವಿಜಯಪುರ : ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಗನ್ ಮ್ಯಾನ್ ಹಾಗೂ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಪುತ್ರನ ನಡುವೆ ಗಲಾಟೆ ನಡೆದಿದೆ.

ವಿಜಯಪುರ ಜಿಲ್ಲೆ ಕೋಲ್ಹಾರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ‌. ಸಕ್ಕರೆ ಕಾರ್ಖಾನೆಗೆ ಕೆ.ಐ.ಎ.ಡಿ.ಬಿ ಭೂಸ್ವಾಧೀನ ಪಡೆಸಿಕೊಂಡಿದ್ದು, ಭೂಮಿ ನೀಡಿದ್ದ ರೈತರಿಗೆ ಹಣ ಸಂದಾಯವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಂದ ಸಚಿವ ಶಿವಾನಂದ ಪಾಟೀಲ್ ಕಾರಿಗೆ ಮುತ್ತಿಗೆ ಹಾಕಿದ್ದ ವೇಳೆ ವಾಗ್ದಾದ ನಡೆದಿದೆ. ಈ ವೇಳೆ ಸಚಿವರ ಗನ್ ಮ್ಯಾನ್ ಹಾಗೂ ಬೆಳ್ಳುಳ್ಳಿ ಪುತ್ರನ ನಡುವೆ ಗಲಾಟೆ ನಡೆದಿದೆ.

ಆರೋಗ್ಯ ಸಚಿವರ ಎದುರಲ್ಲೆ ಗನ್ ಮ್ಯಾನ್ ಹಾಗೂ ಮಾಜಿ ಮಲ್ಲನಗೌಡ ನಡುವೆ ಹೊಡೆದಾಟ ನಡೆದಿದ್ದರಿಂದ ಮಲ್ಲನಗೌಡ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರು ಮುತ್ತಿಗೆ ಹಾಕಿದಾಗ, ಕೆಳಗಿಳಿದು ದಾರಿ ಬಿಡಲು ಸೂಚಿಸಿದ ಸಚಿವ ಶಿವಾನಂದ ಪಾಟೀಲ್ ಗೆ ದಾರಿ ಬಿಡೋದಿಲ್ಲ ಅಂತ ಮಲ್ಲನಗೌಡ ಬೆಳ್ಳುಬ್ಬಿ ಹೇಳಿದ್ದಾನೆ. ಈ ವೇಳೆ ಸಚಿವರ ಗನ್ ಮೇನ್ ಜೊತೆ ಗಲಾಟೆ ನಡೆದಿದೆ.