ಬರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ ರೈತರ ಮುಖದಲ್ಲಿ ಮಂದಹಾಸ

ಬರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ ರೈತರ ಮುಖದಲ್ಲಿ ಮಂದಹಾಸ

ವಿಜಯಪುರ : ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಜೀವನಾಡಿ ಆಲಮಟ್ಟಿ ಜಲಾಶಯ ಭರ್ತಿಯಾಗಲು ಕೇವಲ ಅರ್ಧ ಅಡಿಯಷ್ಟು ಬಾಕಿ ಇದ್ದು ಈ ಬಾರಿಯಾದರೂ ಮುಂಗಾರು- ಹಿಂಗಾರು ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗಬಹುದೆಂಬ ಆಸೆಯಲ್ಲಿ ರೈತಾಪಿ ವರ್ಗ ಸಂತಸಗೊಂಡಿದೆ.

ಮಹಾರಾಷ್ಟ್ರದ ಮಹಾಬಲೇಶ್ವರ, ಸಾತಾರಾ ಸೇರಿದಂತೆ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಜಲಾಶಯಕ್ಕೆ ನಿರೀಕ್ಷೆಗೆ ಮೀರು ನೀರು ಹರಿದು ಬಂದಿದೆ. 

ಕಳೆದ ಎರಡು ದಿನಗಳಿಂದ ಜಲಾಯನ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಒಳಹರಿವು ಸ್ವಲ್ಪ ಕಡಿಮೆಯಾಗಿತ್ತು. ಒಳಹರಿವು ಪ್ರಮಾಣ ಕಡಿಮೆಯಾಗಿದ್ದರಿಂದ ನೀರು ಸಂಗ್ರಹ ಪ್ರಮಾಣ ಸಹ ಕಡಿಮೆಯಾಗುವ ಭೀತಿ ಎದುರಾಗಿತ್ತು. ಇದನ್ನು ಸರಿದೂಗಿಸಲು ಹೊರಹರಿವು ಸಹ ಕಡಿಮೆ ಮಾಡಲಾಗಿತ್ತು. ಈಗ ಮತ್ತೆ ಮಳೆ ಆರ್ಭಟ ಹೆಚ್ಚಾದ ಕಾರಣ ಹೊರ ಹರಿವು ಸಹ ಹೆಚ್ಚುವರಿಯಾಗಿ ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟದಲ್ಲಿ ಹೆಚ್ಚು ಮಳೆಯಾದರೆ ಆಲಮಟ್ಟಿ ಭರ್ತಿಯಾದ ಮೇಲೆ ಎಲ್ಲ 26 ಕ್ರಸ್ ಗೇಟ್‍ಗಳನ್ನು ತೆರೆದು ನಾರಾಯಣಪುರ ಜಲಾಶಯಕ್ಕೆ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇದೆ.

ಸದ್ಯ ಆಲಮಟ್ಟಿ ಜಲಾಶಯದಲ್ಲಿ 26299 ಕ್ಯೂಸೆಕ್ಸ್ ಒಳಹರಿವು ಇದ್ದು, ಹೊರಹರಿವು 962 ಇದೆ.
ಗರಿಷ್ಠ ಮಟ್ಟ : 519.60ಮೀಟರ್ ಸಾಮರ್ಥ್ಯದ ಜಲಾಶಯದಲ್ಲಿ ಇಂದು 518.82ಮೀಟರ ನೀರು ಸಂಗ್ರಹವಾಗಿದೆ.