ವಿದ್ಯುತ್ ತಗುಲಿ ಲೈನ್ ಮೆನ್ ಸಾವು‌. ಅಧಿಕಾರಿಗಳ ನಿರ್ಲಕ್ಷಕ್ಕೆ ಕುಟುಂಬಸ್ಥರ ಆಕ್ರೋಶ

ವಿದ್ಯುತ್ ತಗುಲಿ ಲೈನ್ ಮೆನ್ ಸಾವು‌. ಅಧಿಕಾರಿಗಳ ನಿರ್ಲಕ್ಷಕ್ಕೆ ಕುಟುಂಬಸ್ಥರ ಆಕ್ರೋಶ

ಬಾಗಲಕೋಟೆ : ವಿದ್ಯುತ್ ಕಂಬದಲ್ಲಿ ತಂತಿ ಪರಿಶೀಲನೆ ವೇಳೆ ದಿಡೀರ್ ವಿದ್ಯುತ್ ಪ್ರವಹಿಸಿದ ಪರಿಣಾಮ ಲೈನ್ ಮನ್ ಸಾವಿಗೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಟಗೂರು ಗ್ರಾಮದಲ್ಲಿ ನಡೆದಿದೆ.

೨೬ ವರ್ಷದ ನವೀನ ಚಿಕ್ಕಮಠ ಮೃತ ಲೈನ್ ಮನ್. ಮೃತ ಲೈಮ್ ಮನ್ ಹುನಗುಂದ ಪಟ್ಟಣದ ನಿವಾಸಿ ಎಂದು ತಿಳಿದು ಬಂದಿದೆ. ವಿದ್ಯುತ್ ಕಡಿತಗೊಳಿಸಿ ಮೃತ ನವೀನ ಪರಿಶೀಲನೆ ಮಾಡುತ್ತಿದ್ದ ವೇಳೆ ಗುತ್ತಿಗೆಯಾಧಾರಿತ ಸಿಬ್ಬಂದಿಗಳು ವಿದ್ಯುತ್ ಕನೆಕ್ಷನ್ ಕೊಟ್ಟಿದ್ದಾರೆ. ಕೆಇಬಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನವೀನ ಸಾವಿಗೀಡಾಗಿದ್ದಾಗಿ ಮೃತನ ಸಂಬಂಧಿಕರು ಹಾಗೂ ಲೈನ್ ಮನ್ ಗಳು ಕೂಡಲಸಂಗಮದ ಕೆಇಬಿ ಗ್ರೀಡ್ ಕಚೇರಿ ಬಳಿ ಎದುರು ಪ್ರತಿಭಟನೆ ನಡೆಸಿದರು.

ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.