ಮರಳು ಮಾಫಿಯಾ ವಿರುದ್ಧ ತಿರುಗಿ ಬಿದ್ದ ಗ್ರಾಮಸ್ಥರು. ಹಿಟಾಜಿ ತಡೆದು ಆಕ್ರೋಶ‌

ಮರಳು ಮಾಫಿಯಾ ವಿರುದ್ಧ ತಿರುಗಿ ಬಿದ್ದ ಗ್ರಾಮಸ್ಥರು. ಹಿಟಾಜಿ ತಡೆದು ಆಕ್ರೋಶ‌

ವಿಜಯಪುರ : ಭೀಮಾ ನದಿಯಲ್ಲಿನ ಮರಳನ್ನು ಮಹಾರಾಷ್ಟ್ರದ ಮರಳು ಮಾಫಿಯಾದವರು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

 ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಣಿ ಬಳಿ ನದಿಪಾತ್ರದಲ್ಲಿ, ಗ್ರಾಮಸ್ಥರು, ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಮಧ್ಯವಿರುವ ಭೀಮಾ ನದಿಯಲ್ಲಿರುವ ಕರ್ನಾಟಕ ಪಾಲಿನ ಮರಳನ್ನು ಮಹಾರಾಷ್ಟ್ರ ರಾಜ್ಯದ ಮರಳುಗಾರಿಕೆ ಗುತ್ತಿಗೆ ಪಡೆದವರು ಲೂಟಿ ಮಾಡುತ್ತಿದ್ದಾರೆಂದು ಹಿಟ್ಯಾಚ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ನದಿಯಲ್ಲಿ ಕರ್ನಾಟಕ ಹಾಗೂ  ಮಹಾರಾಷ್ಟ್ರ ಗಡಿ ಗುರುತು ಹಾಕದಿರುವುದೇ ಇಂದಿನ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಭೀಮಾನದಿಯಲ್ಲಿ ಉಭಯ ರಾಜ್ಯಗಳ ಗಡಿ ಗುರುತು ಹಾಕಬೇಕು. ಅಲ್ಲಿಯವರೆಗೆ ಎರಡೂ ರಾಜ್ಯಗಳ ಭಾಗದಲ್ಲಿ ಮರಳುಗಾರಿಕೆ ನಿಲ್ಲಿಸಬೇಕೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ‌‌.