ಇಸ್ರೇಲ್ ಮಾದರಿ ಪಾಲಿಸುತ್ತಿದ್ದಾರೆ ದಿವ್ಯಾಂಗ ಅನ್ನದಾತ..

ಇಸ್ರೇಲ್ ಮಾದರಿ ಪಾಲಿಸುತ್ತಿದ್ದಾರೆ ದಿವ್ಯಾಂಗ ಅನ್ನದಾತ..

ವಿಜಯಪುರ : ಇಸ್ರೇಲ್ ಮಾದರಿ ಕೃಷಿ ಮೀರಿಸುವಂತೆ ಹೊಸ ತಂತ್ರಜ್ಞಾನಗಳೊಂದಿಗೆ ವಿಜಯಪುರದಲ್ಲಿ‌ ಮಿಶ್ರ ಬೇಸಾಯ ಪದ್ಧತಿ ಮಾಡಲಾಗಿದೆ‌.

ಕಗ್ಗೋಡ ಗ್ರಾಮದ ಗೋ ಶಾಲೆ ಆವರಣದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಚಂದ್ರಪ್ಪ ಅನ್ನೋ  ಮಾದರಿ ರೈತ ಎಲ್ಲರನ್ನು ಆಕರ್ಷಿಸುತ್ತಿದ್ದಾರೆ.

ಹುಟ್ಟಿನಿಂದಲೂ ಅಂದನಾಗಿದ್ದರು ನಾನು ಯಾರಿಗೂ ಕಮ್ಮಿ ಇಲ್ಲ ಅನ್ನೋವಂತೆ ಒಂದು ಎಕರೆ ಪ್ರದೇಶದಲ್ಲಿ 151 ವಿವಿಧ ಬೆಳೆಗಳನ್ನು ಬೆಳೆದು ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಇವರ ಬೇಸಾಯ ಪದ್ಧತಿ ನೋಡಲು ರಾಜ್ಯದ ಮೂಲೆ‌ ಮೂಲೆಯಿಂದ ರೈತರು ಆಗಮಿಸುತ್ತಿದ್ದಾರೆ.

ತಂತ್ರಜ್ಞಾನ ಬಳಸಿ ಅಂಧ ರೈತರು ಹೇಗೆ ಬೇಸಾಯ‌ ಮಾಡುವುದು ಎಂಬುದನ್ನು ಕೃಷಿ ತರಂಗ ಎಂಬ ಸಂಸ್ಥೆಯಡಿ ತರಬೇತಿ ನೀಡಲಾಗುತ್ತಿದೆ. ಮಣ್ಣಿನ ತೇವಾಂಶ ಎಷ್ಟಿದೆ ಎಂಬ‌ ಮಾಹಿತಿಯ ಮಷಿನ್, ಬಿಸಿಲಿನ ತೀವ್ರತೆಗೆ ಒಂದು ಮಷಿನ್, ಕಾಳು ಕಡಿಗಳನ್ನು ತಿನ್ನಲು ಬಂದ ಪಕ್ಷಿಗಳ ಹಾವಳಿಯಿಂದ ತಪ್ಪಿಸಲು ಮತ್ತೊಂದು ಮಷಿನ್. ಹೀಗೆ ಸೆನ್ಸಾರ್ ಗಳ ಮೂಲಕ ಧ್ವನಿ ವರ್ಧಕಗಳ ನೆರವಿನಿಂದ ರೈತರಿಗೆ ಬೆಳೆ ಬೆಳಯಲು ಸಹಾಯಕವಾಗಿದೆ.

“ರೈತರ ನಡೆ ವೈಜ್ಞಾನಿಕ ಕೃಷಿಯ ಕಡೆ” ಎಂಬ ಧ್ಯೇಯ ವಾಕ್ಯದಡಿ ಕೃಷಿ ತರಂಗ ಸಂಸ್ಥೆ ತರಬೇತಿ ನೀಡುತ್ತಿದ್ದು ಅದನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಚಂದ್ರಪ್ಪ ಇತರರಿಗೆ ಮಾದರಿಯಾಗಿದ್ದಾರೆ.