ಯುಪಿಎಸ್ಸಿ ಪರೀಕ್ಷೆಯಲ್ಲಿ 307 ಸ್ಥಾನ ಪಡೆದ ರೈತನ ಮಗ. ವಿಜಯಪುರ ಯುವಕನ ಸಾಧನೆ

ಯುಪಿಎಸ್ಸಿ ಪರೀಕ್ಷೆಯಲ್ಲಿ 307 ಸ್ಥಾನ ಪಡೆದ ರೈತನ ಮಗ. ವಿಜಯಪುರ ಯುವಕನ ಸಾಧನೆ

ವಿಜಯಪುರ : ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 307 ನೇ ಸ್ಥಾನ ಪಡೆಯುವ ಮೂಲಕ ವಿಜಯಪುರ ಜಿಲ್ಲೆಯ ಯುವಕ ಸಾಧನೆ ಮಾಡಿದ್ದಾರೆ.

ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಯುವಕ ಗಿರೀಶ ಕಲಗೊಂಡ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದು, ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ. 4ನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಗಿರೀಶ ಅವರು ಈ ಸಾಧನೆ ಮಾಡಿದ್ದು, ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕೃಷಿ ಕುಟುಂಬದಲ್ಲಿ ಜನಿಸಿದ ಗಿರೀಶ ಈಗಾಗಲೇ ಮೂರು ಸಲ ಪರೀಕ್ಷೆ ಬರೆದಿದ್ದು‌, ರಾಜ್ಯಶಾಸ್ತ್ರ ಹಾಗೂ ಅಂತರಾಷ್ಟ್ರೀಯ ಸಂಬಂಧಗಳು ಐಚಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು.

ಗಿರೀಶ್ ಅವರದ್ದು ರೈತಾಪಿ ಕುಟುಂಬ. ಅವರ ತಂದೆ ಧರ್ಮರಾಜ್ ನಾಗಠಾಣದಲ್ಲಿ 6 ಏಕರೆ ಜಮೀನು ಹೊಂದಿದ್ದು, ಅದರಲ್ಲೇ ಕೃಷಿ ಮಾಡಿಕೊಂಡಿದ್ದರು.

ಕಷ್ಟದಲ್ಲೆ ಶಿಕ್ಷಣ ಪೂರೈಸಿದ ಗಿರೀಶ ಕಲಗೊಂಡ ಅವರ ಕೂಡು ಕುಟುಂಬದಲ್ಲಿ ಒಟ್ಟು 8 ಜನ ಸದಸ್ಯರಿದ್ದು, ಗಿರೀಶ್ ಒಬ್ಬನೆ ಗಂಡು ಮಗನಾಗಿದ್ದಾರೆ. ಇಬ್ಬರು ಸಹೋದರಿಯರಿದ್ದಾರೆ.