ಬಿಜೆಪಿಯಲ್ಲಿ ಯಾರು ಡೈನಾಮಿಕ್ ಇಲ್ಲ. ಪಕ್ಷವೇ ನಮಗೆ ಡೈನಾಮಿಕ್, ಪಕ್ಷವೇ ಹೀರೋ. ಯತ್ನಾಳ್ ಗೆ ಅಪ್ಪು ಪಟ್ಟಣಶೆಟ್ಟಿ ಟಾಂಗ್

ಬಿಜೆಪಿಯಲ್ಲಿ ಯಾರು ಡೈನಾಮಿಕ್ ಇಲ್ಲ. ಪಕ್ಷವೇ ನಮಗೆ ಡೈನಾಮಿಕ್, ಪಕ್ಷವೇ ಹೀರೋ. ಯತ್ನಾಳ್ ಗೆ ಅಪ್ಪು ಪಟ್ಟಣಶೆಟ್ಟಿ ಟಾಂಗ್

ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಯೋಗ್ಯನಿದ್ದೇನೆ ಎಂದು ವಿಜಯಪುರ ನಗರದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.

ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ಮಾಡಿಕೊಡಲಿ. ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕರೆ ಸ್ವೀಕರಿಸುತ್ತೇನೆ. ನನಗೆ ಅಧ್ಯಕ್ಷಸ್ಥಾನ ಕೊಟ್ಟಲ್ಲಿ ಪಕ್ಷದಲ್ಲಿ ಇತಿಹಾಸವಾಗಲಿದೆ ಎಂದು ಹೇಳಿದರು.

ಯಡಿಯೂರಪ್ಪ ನಂತ್ರ ನಾನೇ ಡೈನಾಮಿಕ್ ಲೀಡರ್ ಎಂದ ಯತ್ನಾಳಗೆ ಟಾಂಗ್ ನೀಡಿದ ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಪಕ್ಷದಲ್ಲಿ ಯಾರು ಡೈನಾಮಿಕ್, ಹೀರೋ ಅನ್ನೋದು ಇಲ್ಲ. ಪಕ್ಷವೇ ನಮಗೆ ಡೈನಾಮಿಕ್, ಪಕ್ಷವೇ ಹೀರೋ ಎಂದು ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವೇಲ್ ಹಾಕಿದ್ದೀನಿ ಅಂತಾ ಶಾಸಕ ಯತ್ನಾಳ ಹೇಳಿಕೆಗೆ ಟಾಂಗ್ ನೀಡಿದ ಅಪ್ಪು ಪಟ್ಟಣಶೆಟ್ಟಿ, ಟವೇಲ್ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಸ್ ಅಥವಾ ರೈಲ್ವೆ ಸೀಟ್ ಅಲ್ಲ. ಪಕ್ಷದ ಸ್ಥಾನ, ಯಾರಿಗೆ ಯೋಗ್ಯತೆ ಇರುತ್ತೆ ಅವರನ್ನ ಪಕ್ಷ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲಿದೆ ಎಂದರು.