ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೆಕೆಂಡ್ ಅನಂತಕುಮಾರ್ ಇದ್ದಂಗೆ. ಎಂಬಿ ಪಾಟೀಲ್ ಟಾಂಗ್..

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೆಕೆಂಡ್ ಅನಂತಕುಮಾರ್ ಇದ್ದಂಗೆ. ಎಂಬಿ ಪಾಟೀಲ್ ಟಾಂಗ್..

ವಿಜಯಪುರ : ಯಾವುದೇ ಕೋಮು ಭಾವನೆ ಕೆರಳುವಂತೆ ಪ್ರಚೋದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಗೃಹ ಸಚಿವ ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಕೆಲವ ರಾಜಕೀಯ ಮುಖಂಡರು, ಪತ್ರಕರ್ತರು ಕೋಮು ಪ್ರಚೋದನೆ ಮಾಡುತ್ತಿದ್ದಾರೆ‌‌. ವಿಜಯಪುರದಲ್ಲಿರುವ ಸೆಕೆಂಡ್ ಅನಂತಕುಮಾರ್ ಅವರು ಸಹ‌ ಕೋಮುಭಾವನೆ ಕೆರಳಿಸುವಂತೆ ಮಾತನಾಡುತ್ತಿದ್ದಾರೆ ಎಂದು ಯತ್ನಾಳ್ ಗೆ ಟಾಂಗ್ ನೀಡಿದರು.

ಬೇಗಂ ತಲಾಬ್ ಕೆರೆ ಅಭಿವೃದ್ದಿ ಕಾಮಗಾರಿ ವೀಕ್ಷಣೆ ‌ಮಾಡಿದ ಬಳಿಕ ಮಾತನಾಡಿದ ಅವರು, ಕೋಮು ಭಾವನೆ ಕೆರಳಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ‌ನೀಡಿದರು.

ಯಾರೇ ಪ್ರಚೋದನಕಾರಿ ಹೇಳಿಕೆ ನೀಡಿದವರು ಮಿತಿ ಒಳಗೆ ಇರಬೇಕು. ಕೆ‌ಎಸ್ ಭಗವಾನ, ಅನಂತಕುಮಾರ ಹೆಗಡೆ, ಯತ್ನಾಳ, ಪ್ರತಾಪ ಸಿಂಹ ಸೇರಿದಂತೆ ಎಲ್ಲರೂ ವಾಕ್ ಸ್ವಾತಂತ್ರ್ಯದ ಮಿತಿಯೊಳಗೆ ಮಾತನಾಡಬೇಕು. ಪ್ರಚೋದನೆ ಮಿತಿ ಮೀರಿದ್ರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಇಂತಹವರ ಕುರಿತು ಇಲಾಖೆಯಲ್ಲಿ ಆಂತರಿಕವಾಗಿ ಚರ್ಚಿ ಸಲಾಗುವುದು. ಬಹಳ‌ ಜಾಗೃತೆಯಿಂದ ಹಾಗೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೌರಿ‌ ಲಂಕೇಶ ಹಾಗೂ ಕಲಬುರ್ಗಿ ಅವರ ಪ್ರಕರಣಗಳು ತ್ವರಿತಗತಿಯಲ್ಲಿ‌ ನಡೆಯುತ್ತಿವೆ ಎಂದರು.