ಗಿರೀಶ್ ಕಾರ್ನಾಡ್ ಸಾವಿಗೆ ವ್ಯಂಗ್ಯವಾಗಿ ಶ್ರದ್ದಾಂಜಲಿ ಸಲ್ಲಿಸಿದ ಶಾಸಕ ಯತ್ನಾಳ್

ಗಿರೀಶ್ ಕಾರ್ನಾಡ್ ಸಾವಿಗೆ ವ್ಯಂಗ್ಯವಾಗಿ ಶ್ರದ್ದಾಂಜಲಿ ಸಲ್ಲಿಸಿದ ಶಾಸಕ ಯತ್ನಾಳ್

ವಿಜಯಪುರ : ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಗಿರೀಶ್ ಕಾರ್ನಾಡ್ ನಿಧನಕ್ಕೆ ವಲ್ಲದ ಮನಸ್ಸಿನಿಂದಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಂತಾಪ ಸೂಚಿಸಿದ್ದಾರೆ.

ನಮ್ಮ ಜೊತೆ ಅವರ ಒಡನಾಟವಿಲ್ಲ ಅವರಗಿಂಲೂ ನಾವು ಬಹಳ ಸಣ್ಣವರು. ಅವರು ಬಹಳ ಹಿರಿಯರು, ಇಲ್ಲಿ ಎಲ್ಲ ಅವರ ಫೋಟೋ ಇದೆ ನೋಡಿ ಎಂದು ವ್ಯಂಗ್ಯವಾಗಿ ಶಾಸಕ ಯತ್ನಾಳ್ ಮಾತನಾಡಿದರು.

ಗಿರೀಶ್ ಕಾರ್ನಾಡ್ ಸಾವಿಗೆ ವ್ಯಂಗ್ಯವಾಗಿ ಶ್ರದ್ದಾಂಜಲಿ ಸಲ್ಲಿಸಿದ ಶಾಸಕ ಯತ್ನಾಳ್ 

ನಾನೇನು ಸಾಹಿತಿ ಅಲ್ಲ, ಕವಿ ಅಲ್ಲ ಸಾಹಿತಿಗಳ ಜೊತೆ ನಮ್ಮದೇನಿದೆ ನಾನೊಬ್ಬ ರಾಜಕಾರಣಿ ಅಷ್ಟೆ ಎಂದಿರುವ ಯತ್ನಾಳ್, ಜ್ಞಾನ ಪೀಠ ಪ್ರಶಸ್ತಿ ಅವರಿಗೂ ಕೊಟ್ಟಿದ್ರು, ಬಹಳ ಜನಕ್ಕೆ ಕೊಟ್ಟಿದ್ದಾರೆ ಅದೇ ರೀತಿ ಅವರಿಗೂ ಕೊಟ್ಟಿದ್ದಾರೆ ಎಂದರು.

ಹೆಚ್ಚಾಗಿ ದೇಶದ ಬಗ್ಗೆ ಚಿಂತನೆ ಮಾಡುವವರಿಗೆ ಜ್ಞಾನಪೀಠ ಸಿಗಬೇಕಿತ್ತು, ಅಂತಹವರು ಕರ್ನಾಟಕದಲ್ಲಿ ಬಹಳ ಜನ ಇದ್ದಾರೆ. ಅವರಿಗೂ ಸಿಗಲಿ ಅಂತಾ ಹಾರೈಸುತ್ತೇನೆ ಎಂದರು.