ಸ್ಮಶಾನದಲ್ಲಿ ಜನ್ಮದಿನ ಆಚರಿಸಿಕೊಂಡ ಯುವ ಮುಖಂಡ

ಸ್ಮಶಾನದಲ್ಲಿ ಜನ್ಮದಿನ ಆಚರಿಸಿಕೊಂಡ ಯುವ ಮುಖಂಡ

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದ ಸುಖದೇವ ಕಟ್ಟಿಮನೀ(36), ಸ್ಮಶಾನದಲ್ಲಿ ಹುಟ್ಟುಹಬ್ಬ ಆರಿಸಿಕೊಳ್ಳು ಮೂಲಕ ವಿಶಿಷ್ಠವಾಗಿ ಗುರುತಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿಯ ಸ್ಮಶಾನದಲ್ಲಿ ಸ್ನೇಹಿತರೊಂದಿಗೆ ಸೇರಿ ಹುಟ್ಟು ಹಬ್ಬ ಆಚರಿಸಿಕೊಂಡು ಕೇಕ್ ಕಟ್ ಮಾಡಿ ಸಂಭ್ರ‌ಮಿಸಿದರು.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ಗುತ್ತಿಗೆ ಶಿಕ್ಷಕನಾಗಿರುವ ಸುಖದೇವ ಕಟ್ಟಿಮನಿ ಅವರ ಈ ವಿಶಿಷ್ಠ ಕಾರ್ಯಕ್ಕೆ ಸ್ನೇಹಿತರು ಸಾಥ್ ನೀಡಿದರು. ಸುಖದೇವ ಅವರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.